ಸೆಕ್ಯೂರಿಟಿ ಗಾರ್ಡ್ಮೋ ಸಿನಿಮಾ ನಂತನಾಗಿದ್ದು ಮೋಹನ್ ಜುನೇಜಾ

 ಮೋಹನ್ ಜುನೇಜಾ


ಮೋಹನ್ ಜುನೇಜಾ ಕನ್ನಡದ ಪ್ರಸಿದ್ಧ ನಟರಾಗಿದ್ದವರು. ಅವರು ತಾವು ಮಾಡಿದ ಜುನೇಜಾ ಎಂಬ ಪಾತ್ರದ ಹೆಸರನ್ನು ಸೇರಿಸಿಕೊಂಡು ಮೋಹನ್ ಜುನೇಜಾ ಎಂದು ಹೆಸರಾಗಿದ್ದರು. ಇಂದು ಅವರ ಸಂಸ್ಮರಣೆ ದಿನ. ಬೆಂಗಳೂರಿನಲ್ಲಿ ಜನಿಸಿದ ಮೋಹನ್  ಅವರ ಕುಟುಂಬದವರು ಮೂಲತಃ ತುರುವೇಕೆರೆಗೆ ಸೇರಿದವರು. ಅವರ ತಂದೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದು ನೆಲೆಸಿದರು.  ತಂದೆ ಕೆಲಸದ ಮೇಲೆ ವರ್ಗಾವಣೆ ಆಗುತ್ತಿದ್ದ ಮೂರ್ನಾಲ್ಕು ಕಡೆ ಇವರ ವಿದ್ಯಾಭ್ಯಾಸ ನಡೆಯಿತು. ಚೆನ್ನಾಗಿ ಓದುತ್ತಿದ್ದ ಹುಡುಗ ಮೋಹನ್ ಅವರಿಗೆ ಕ್ರಮೇಣ ಶಾಲೆಗೆ ಹೋಗುವುದು ನೆಪವಾಗಿ ಸಿನಿಮಾಗೆ ಹೋಗುವ ಚಪಲ ಬದುಕಿನ ದಿಕ್ಕು ಬದಲಿಸಿತು. 


ಮೋಹನ್ ಜುನೇಜಾ ಸೆಕ್ಯೂರಿಟಿ ಗಾ


ರ್ಡ್‌ ಆಗಿ, ಫೋಟೋಗ್ರಾಫರ್‌ ಆಗಿ, ಟೈಲರ್ ಅಂಗಡಿಗೆ ಹೋಗಿ ಗುಂಡಿ ಹೊಲಿದವರಾಗಿ ಹಲವು ರೀತಿ ಬದುಕು ನಡೆಸಿದರು. ಮುಂದೆ ರಂಗಶಾಲೆ ಸೇರಿಕೊಂಡು ದಾರಿ ಬದಲಾಯಿಸಿಕೊಂಡರು.  ಹಲವು ನಾಟಕ, ಬೀದಿ ನಾಟಕಗಳಲ್ಲಿ ನಟಿಸಿದರು. ವಠಾರ ಧಾರಾವಾಹಿಯ ಮೂಲಕ  ಕಿರುತೆರೆಗೆ ಬಂದರು. 


ವಾಲ್ ಪೋಸ್ಟರ್ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಬಂದ ಮೋಹನ್ ಜುನೇಜಾ ಚೆಲ್ಲಾಟ ಚಿತ್ರದಿಂದ ಹೆಸರಾದರು. ಜೋಗಿ, ಕಬ್ಜ, ಜೇಮ್ಸ್ ಹೀಗೆ ಐನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಮೂಡಿ ಎಲ್ಲೆಡೆ ಜಯಭೇರಿ ಬಾರಿಸಿರುವ ಇತ್ತೀಚಿನ  ಕೆಜಿಎಫ್ 2 ಚಿತ್ರದಲ್ಲೂ ಪಾತ್ರ ಮಾಡಿದ್ದರು. ಕಿರುತೆರೆ ಮತ್ತು ಸಿನಿಮಾ ಎರಡೂ ರಂಗದಲ್ಲೂ ಸಕ್ರಿಯರಾಗಿದ್ದರು.ಬೇರೆ ಭಾಷೆಯ ಚಿತ್ರಗಳಲ್ಲೂ ಬಣ್ಣ ಹಚ್ಚಿದ್ದರು.ಕಷ್ಟಪಟ್ಟು ಕಲಾಜೀವನದಲ್ಲಿ ಬದುಕು ಕಾಣುತ್ತಿದ್ದ 

ಮೋಹನ್ ಜುನೇಜಾ 2023ರ ಮೇ7ರಂದು ಇನ್ನೂ 54ನೇ ವಯಸಿನಲ್ಲಿ ನಿಧನರಾದರು.

Comments

Popular posts from this blog

ಆಕಾರದಲ್ಲಿ ಗುಲಾಬಿ ರಂಗಿದೆ ಈ ಕಣ್ಗಳಲ್ಲಿ ಶರಾಬು ತುಂಬಿದೆ ಥಳಕು

ಶಂಕರ್ ನಾಗ್ ಜೀವನ ಕಥೆ ಕರುನಾಡು ಕಂಡ ಅದ್ಬುತ ಪ್ರತಿಭೆ

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಗುಡ್ ನ್ಯೂಸ್ ಎಂದಿನಂತೆ ಸೇವೆ ಮುಂದುವರಿಸಲು ಕರ್ನಾಟಕ ಆದೇಶ‌