ಟೈಗರ್ ಪ್ರಭಾಕರ್ ಜೀವನಚರಿತ್ರೆ

ಟೈಗರ್ ಪ್ರಭಾಕರ್ ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರಾಗಿದ್ದರು. ಅವರ ನಿಜ ಹೆಸರು ಪ್ರಭಾಕರ್ "ಟೈಗರ್" ಎಂಬ ಪದವನ್ನು ಅವರು ತಮ್ಮ ವೇಷಧಾರೆಯ ಹಾಗೂ ಹೋರಾಟದ ಪಾತ್ರಗಳಿಂದ ಪಡೆದುಕೊಂಡರು. ಅವರು 1980 ಮತ್ತು 1990ರ ದಶಕಗಳಲ್ಲಿ ಹೆಚ್ಚು ಪ್ರಸಿದ್ಧಿಯಾಗಿದ್ದರು. ತಮ್ಮ ವಿಶಿಷ್ಟ ಶೈಲಿ, ಶಕ್ತಿಯುತ ಅಭಿನಯ ಹಾಗೂ ನಿರ್ದಾಕ್ಷಿಣ್ಯ ನಂಟು ಪಾತ್ರಗಳಿಂದ ಅವರು ಜನಮಾನಸದಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದ್ದರು. ಆರಂಭಿಕ ಜೀವನ: ಟೈಗರ್ ಪ್ರಭಾಕರ್ ಜನನ 1948ರ ಮಾರ್ಚ್ 30th ರಂದು ಜನಿಸಿದರು , ಅವರು ಮೂಲತಃ ಕನ್ನಡಿಗರಾಗಿದ್ದರು. ಅವರು ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ವಿವಿಧ ಕೆಲಸಗಳಲ್ಲಿ ತೊಡಗಿದ್ದವರು. ಸಿನಿಮಾ ಜೀವನ: ಅವರು ತಮ್ಮ ಸಿನಿಮಾ ಜೀವನವನ್ನು ಸಹಾಯಕ ಪಾತ್ರಗಳಿಂದ ಆರಂಭಿಸಿದರು. ಮುಂದೆ ನಟನೆ, ಹೋರಾಟದ ದೃಶ್ಯಗಳಲ್ಲಿ ವಿಶಿಷ್ಟತೆಯನ್ನು ತೋರಿಸಿ ನಾಯಕನ ಪಾತ್ರಗಳಿಗೂ ಭರ್ಜರಿ ಎಂಟ್ರಿ ನೀಡಿದರು. ಅವರು ಕನ್ನಡ ಚಿತ್ರರಂಗದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಅಭಿನಯಿಸಿದ್ದರು. ಅವರ ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ "ಬಾಂಬೆ ದಾದ "ಮೈಸೂರ್ ಹುಲಿ " ಕಾಡಿನ ರಾಜ "ಕಲಿಯುಗ ಭೀಮ "ಸೆಂಟ್ರಲ್ ರೌಡಿ ಮತ್ತು ಖಳನಾಯಕ ಸೇರಿವೆ. ತಮ್ಮ ಶಕ್ತಿಯುತ ಸಂಭಾಷಣಾ ಶೈಲಿ, ದೇಹದಾಕ್ಷಿಣ್ಯ ಮತ್ತು ಪಾತ್ರಗಳಿಂದ ಅವರು ಟೈಗರ್ ಎಂಬ ಬಿರುದನ್ನು ಸಂಪಾದಿಸಿದರು. ವೈಯ...