ಕನ್ನಡಿಗ ನಟ ಡಿ ಎಸ್ ಮುರಳಿ

ಡಿ. ಎಸ್. ಮುರಳಿ ಕನ್ನಡದವರಾದ ನಟ ಮುರಳಿ ಚಿತ್ರರಂಗದಲ್ಲಿ, ವಿಶೇಷವಾಗಿ ತಮಿಳು ಚಿತ್ರರಂಗದಲ್ಲಿ ಹೆಸರಾಗಿದ್ದು, ಸಣ್ಣ ವಯಸ್ಸಿನಲ್ಲೇ ನಿಧನರಾದರು. ಮುರಳಿ ಅವರು 1964ರ ಮೇ 19ರಂದು ಚೆನ್ನೈನಲ್ಲಿ ಜನಿಸಿದರು. ತಂದೆ ಕನ್ನಡ ಚಲನಚಿತ್ರರಂಗದ ಪ್ರಖ್ಯಾತ ನಿರ್ದೇಶಕರಾದ ಸಿದ್ಧಲಿಂಗಯ್ಯನವರು. 5ನೇ ತರಗತಿಯವರೆಗೆ ಚೆನ್ನೈನಲ್ಲಿ ಓದಿದ ಮುರಳಿ ಮಂದೆ 10ನೇ ತರಗತಿಯವರೆಗೆ ಬೆಂಗಳೂರಿನಲ್ಲಿ ಓದಿದರು. ಮುರಳಿ ತಮ್ಮ 14ನೇ ವಯಸ್ಸಿನಲ್ಲಿ ತಂದೆಯವರಿಗೆ ಸಹಾಯಕರಾಗಿ ಸಹ ನಿರ್ದೇಶನ, ಎಡಿಟಿಂಗ್ ಮುಂತಾದ ಕೆಲಸಗಳಲ್ಲಿ ತೊಡಗಿದರು. ಮುರಳಿ, ತಮ್ಮ ತಂದೆ ಸಿದ್ಧಲಿಂಗಯ್ಯ ಅವರು ನಿರ್ದೇಶಿಸಿದ 'ಪ್ರೇಮ ಪರ್ವ' ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಬಂದರು. ಆ ಚಿತ್ರ ಬಿಡುಗಡೆ ಆದದ್ದು 1983ರಲ್ಲಿ. ಆದರೆ ಮೊದಲು ಬಿಡುಗಡೆ ಆದ ಚಿತ್ರ ಯರಂಕಿ ಶರ್ಮಾ ಅವರು ನಿರ್ದೇಶಿಸಿದ 'ಗೆಲುವಿನ ಹೆಜ್ಜೆ' (1982). ಬಿಳಿ ಗುಲಾಬಿ, ಅಜೇಯ, ಪ್ರೇಮ ಗಂಗೆ, ತಾಯಿ ಕೊಟ್ಟ ತಾಳಿ, ಸಂಭವಾಮಿ ಯುಗೇ ಯುಗೇ, ಅಜಯ್ ವಿಜಯ್ ಅವರು ನಟಿಸಿದ ಇತರ ಕನ್ನಡ ಚಿತ್ರಗಳು. ಮುರಳಿ ಅವರು ಹೆಚ್ಚು ಜನಪ್ರಿಯರಾಗಿದ್ದು ತಮಿಳು ಚಿತ್ರರಂಗದಲ್ಲಿ. ಅವರ ಚರ್ಯೆ ಮತ್ತು ಅಭಿನಯ ಪ್ರತಿಭೆಗಳನ್ನು ತಮಿಳು ಚಿತ್ರರಂಗದ ತನ್ನದಾಗಿ ಕಂಡು ಅವರನ್ನು ಎತ್ತರಕ್ಕೆ ಬೆಳೆಸಿತು. ಮುರಳಿ ತಮಿಳಿನಲ್ಲಿ 'ಪೂವಿಳಂಗು' ಚಿತ್ರದಲ್ಲಿ ಮೊದಲು ನಟಿಸಿದರು...