Posts

ಕನ್ನಡಿಗ ನಟ ಡಿ ಎಸ್ ಮುರಳಿ

Image
 ಡಿ. ಎಸ್.  ಮುರಳಿ ಕನ್ನಡದವರಾದ ನಟ ಮುರಳಿ ಚಿತ್ರರಂಗದಲ್ಲಿ, ವಿಶೇಷವಾಗಿ ತಮಿಳು ಚಿತ್ರರಂಗದಲ್ಲಿ ಹೆಸರಾಗಿದ್ದು, ಸಣ್ಣ ವಯಸ್ಸಿನಲ್ಲೇ ನಿಧನರಾದರು.  ಮುರಳಿ ಅವರು 1964ರ ಮೇ 19ರಂದು ಚೆನ್ನೈನಲ್ಲಿ ಜನಿಸಿದರು.  ತಂದೆ ಕನ್ನಡ ಚಲನಚಿತ್ರರಂಗದ ಪ್ರಖ್ಯಾತ ನಿರ್ದೇಶಕರಾದ ಸಿದ್ಧಲಿಂಗಯ್ಯನವರು.  5ನೇ ತರಗತಿಯವರೆಗೆ ಚೆನ್ನೈನಲ್ಲಿ ಓದಿದ ಮುರಳಿ ಮಂದೆ 10ನೇ ತರಗತಿಯವರೆಗೆ ಬೆಂಗಳೂರಿನಲ್ಲಿ ಓದಿದರು. ಮುರಳಿ ತಮ್ಮ 14ನೇ ವಯಸ್ಸಿನಲ್ಲಿ ತಂದೆಯವರಿಗೆ ಸಹಾಯಕರಾಗಿ ಸಹ ನಿರ್ದೇಶನ, ಎಡಿಟಿಂಗ್ ಮುಂತಾದ ಕೆಲಸಗಳಲ್ಲಿ ತೊಡಗಿದರು.  ಮುರಳಿ,  ತಮ್ಮ ತಂದೆ ಸಿದ್ಧಲಿಂಗಯ್ಯ ಅವರು ನಿರ್ದೇಶಿಸಿದ 'ಪ್ರೇಮ ಪರ್ವ' ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಬಂದರು. ಆ ಚಿತ್ರ ಬಿಡುಗಡೆ ಆದದ್ದು 1983ರಲ್ಲಿ.  ಆದರೆ ಮೊದಲು ಬಿಡುಗಡೆ ಆದ ಚಿತ್ರ ಯರಂಕಿ ಶರ್ಮಾ ಅವರು ನಿರ್ದೇಶಿಸಿದ 'ಗೆಲುವಿನ ಹೆಜ್ಜೆ' (1982).  ಬಿಳಿ ಗುಲಾಬಿ, ಅಜೇಯ, ಪ್ರೇಮ ಗಂಗೆ, ತಾಯಿ ಕೊಟ್ಟ ತಾಳಿ, ಸಂಭವಾಮಿ ಯುಗೇ ಯುಗೇ, ಅಜಯ್ ವಿಜಯ್ ಅವರು ನಟಿಸಿದ ಇತರ ಕನ್ನಡ ಚಿತ್ರಗಳು. ಮುರಳಿ ಅವರು ಹೆಚ್ಚು ಜನಪ್ರಿಯರಾಗಿದ್ದು ತಮಿಳು ಚಿತ್ರರಂಗದಲ್ಲಿ. ಅವರ ಚರ್ಯೆ ಮತ್ತು ಅಭಿನಯ ಪ್ರತಿಭೆಗಳನ್ನು ತಮಿಳು ಚಿತ್ರರಂಗದ ತನ್ನದಾಗಿ ಕಂಡು ಅವರನ್ನು ಎತ್ತರಕ್ಕೆ ಬೆಳೆಸಿತು. ಮುರಳಿ ತಮಿಳಿನಲ್ಲಿ 'ಪೂವಿಳಂಗು' ಚಿತ್ರದಲ್ಲಿ ಮೊದಲು ನಟಿಸಿದರು...

ಸೆಕ್ಯೂರಿಟಿ ಗಾರ್ಡ್ಮೋ ಸಿನಿಮಾ ನಂತನಾಗಿದ್ದು ಮೋಹನ್ ಜುನೇಜಾ

Image
 ಮೋಹನ್ ಜುನೇಜಾ ಮೋಹನ್ ಜುನೇಜಾ ಕನ್ನಡದ ಪ್ರಸಿದ್ಧ ನಟರಾಗಿದ್ದವರು. ಅವರು ತಾವು ಮಾಡಿದ ಜುನೇಜಾ ಎಂಬ ಪಾತ್ರದ ಹೆಸರನ್ನು ಸೇರಿಸಿಕೊಂಡು ಮೋಹನ್ ಜುನೇಜಾ ಎಂದು ಹೆಸರಾಗಿದ್ದರು. ಇಂದು ಅವರ ಸಂಸ್ಮರಣೆ ದಿನ. ಬೆಂಗಳೂರಿನಲ್ಲಿ ಜನಿಸಿದ ಮೋಹನ್  ಅವರ ಕುಟುಂಬದವರು ಮೂಲತಃ ತುರುವೇಕೆರೆಗೆ ಸೇರಿದವರು. ಅವರ ತಂದೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದು ನೆಲೆಸಿದರು.  ತಂದೆ ಕೆಲಸದ ಮೇಲೆ ವರ್ಗಾವಣೆ ಆಗುತ್ತಿದ್ದ ಮೂರ್ನಾಲ್ಕು ಕಡೆ ಇವರ ವಿದ್ಯಾಭ್ಯಾಸ ನಡೆಯಿತು. ಚೆನ್ನಾಗಿ ಓದುತ್ತಿದ್ದ ಹುಡುಗ ಮೋಹನ್ ಅವರಿಗೆ ಕ್ರಮೇಣ ಶಾಲೆಗೆ ಹೋಗುವುದು ನೆಪವಾಗಿ ಸಿನಿಮಾಗೆ ಹೋಗುವ ಚಪಲ ಬದುಕಿನ ದಿಕ್ಕು ಬದಲಿಸಿತು.  ಮೋಹನ್ ಜುನೇಜಾ ಸೆಕ್ಯೂರಿಟಿ ಗಾ ರ್ಡ್‌ ಆಗಿ, ಫೋಟೋಗ್ರಾಫರ್‌ ಆಗಿ, ಟೈಲರ್ ಅಂಗಡಿಗೆ ಹೋಗಿ ಗುಂಡಿ ಹೊಲಿದವರಾಗಿ ಹಲವು ರೀತಿ ಬದುಕು ನಡೆಸಿದರು. ಮುಂದೆ ರಂಗಶಾಲೆ ಸೇರಿಕೊಂಡು ದಾರಿ ಬದಲಾಯಿಸಿಕೊಂಡರು.  ಹಲವು ನಾಟಕ, ಬೀದಿ ನಾಟಕಗಳಲ್ಲಿ ನಟಿಸಿದರು. ವಠಾರ ಧಾರಾವಾಹಿಯ ಮೂಲಕ  ಕಿರುತೆರೆಗೆ ಬಂದರು.  ವಾಲ್ ಪೋಸ್ಟರ್ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಬಂದ ಮೋಹನ್ ಜುನೇಜಾ ಚೆಲ್ಲಾಟ ಚಿತ್ರದಿಂದ ಹೆಸರಾದರು. ಜೋಗಿ, ಕಬ್ಜ, ಜೇಮ್ಸ್ ಹೀಗೆ ಐನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಮೂಡಿ ಎಲ್ಲೆಡೆ ಜಯಭೇರಿ ಬಾರಿಸಿರುವ ಇತ್ತೀಚಿನ  ಕೆಜಿಎಫ್ 2 ಚಿತ್ರದಲ್ಲೂ ಪಾತ್ರ ಮಾಡಿದ್ದರು. ಕಿರುತೆರೆ ಮತ್ತು ಸಿನಿಮಾ ಎ...

ಪುರುಷನನ್ನು ಪ್ರೀತಿಸಲು ಹೇಗೆಂದು ತಿಳಿಯಿರು

Image
  ಪುರುಷನನ್ನು ಪ್ರೀತಿಸುವುದು ಹೇಗೆ...ನೀವು ಓದಲೇಬೇಕು  ಒಬ್ಬ ವ್ಯಕ್ತಿಯನ್ನು ಪ್ರೀತಿಸುವುದು ಎಂದರೆ ಅವನನ್ನು ಸಂಪೂರ್ಣವಾಗಿ ನೋಡುವುದು - ಅವನ ಸಾಮರ್ಥ್ಯಗಳಿಗಾಗಿ ಮಾತ್ರವಲ್ಲ, ಅವನ ನ್ಯೂನತೆಗಳಿಗಾಗಿಯೂ ಸಹ. ಪುರುಷರು ಬಲಶಾಲಿಗಳಾಗಿರಬೇಕು ಎಂದು ನಿರೀಕ್ಷಿಸುವ, ಆದರೆ ಅವರನ್ನು ಎಂದಿಗೂ ಸೌಮ್ಯವಾಗಿರಲು ಬಿಡದ ಈ ಜಗತ್ತಿನಲ್ಲಿ ಅವನಿಗೆ ಸ್ವಂತಿಕೆ, ಸ್ಥಳ ಮತ್ತು ವಾತ್ಸಲ್ಯವನ್ನು ನೀಡುವುದು ಇದರ ಅರ್ಥ. ನಿಜವಾದ ಪ್ರೀತಿ ಎಂದರೆ ಅವಳನ್ನು ಬದಲಾಯಿಸಲು ಪ್ರಯತ್ನಿಸುವುದಲ್ಲ, ಬದಲಾಗಿ ಪ್ರತಿದಿನ ಅವಳನ್ನು ಮತ್ತೆ ಆರಿಸಿಕೊಳ್ಳುವುದು - ಅವಳನ್ನು ಪ್ರೀತಿಸುವುದು ಕಷ್ಟವೆನಿಸಿದರೂ ಸಹ. ಇದನ್ನು ಅರ್ಥ ಮಾಡಿಕೊಳ್ಳಿ.... ಅವನು ಯಾವಾಗಲೂ ಒಂದೇ ರೀತಿ ವರ್ತಿಸುವುದಿಲ್ಲ. ಅವನ ಮೌನವು ದೂರವಾಗಿರದೆ, ಆಯಾಸವಾಗಿರುವ ದಿನಗಳು ಬರುತ್ತವೆ.ಅವನಿಗೆ ತನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ದಿನಗಳು ಏಕೆಂದರೆ ಅವುಗಳನ್ನು ಮರೆಮಾಡಲು ಅವನಿಗೆ ಕಲಿಸಲಾಗಿದೆ.ಅವನು ಪರಿಪೂರ್ಣನಲ್ಲ ಎಂದು ಅರ್ಥಮಾಡಿಕೊಳ್ಳಿ - ಮತ್ತು ಅವನು ಹಾಗೆ ಆಗಲು ಪ್ರಯತ್ನಿಸುತ್ತಿಲ್ಲ.ಅವನೂ ಕೆಲವೊಮ್ಮೆ ಗೊಂದಲಕ್ಕೊಳಗಾಗುತ್ತಾನೆ, ಹೆದರುತ್ತಾನೆ ಮತ್ತು ಸುಸ್ತಾಗುತ್ತಾನೆ.ಅವನ ಜೊತೆ ನಿಲ್ಲು - ಅವನನ್ನು ಮುಂದೆ ತಿದ್ದಲು ಅಲ್ಲ, ಹಿಂದೆ ಹಿಂಬಾಲಿಸಲು ಅಲ್ಲ, ಆದರೆ ಅವನೊಂದಿಗೆ ಸಮಾನರಾಗಿ ಬೆಳೆಯಲು. ಸ್ವಾತಂತ್ರ್ಯ.... ಅವನು ಉಸಿರಾಡಲಿ. ಅವನು ಜೀವಂತವಾಗಿರುವುದನ...

ಆಕಾರದಲ್ಲಿ ಗುಲಾಬಿ ರಂಗಿದೆ ಈ ಕಣ್ಗಳಲ್ಲಿ ಶರಾಬು ತುಂಬಿದೆ ಥಳಕು

Image
  ಆಕಾರದಲ್ಲಿ ಗುಲಾಬಿ ರಂಗಿದೆ ಈ ಕಣ್ಗಳಲ್ಲಿ ಶರಾಬು ತುಂಬಿದೆ  ಥಳಕು ಬಳಕಿನ ಮೈಮಾಟವೀಗ ದಢೂತಿಯಾಗಿದೆ. ಕಣ್ಣುಗಳಲ್ಲಿ ಮಾದಕತೆ ಬದಲು ನಶೆ. ಜೀವನವೇ ಬೇಡೆಂದು ಕುಡಿತಕ್ಕೆ ದಾಸಿಯಾಗಿ, ಮಕ್ಕಳನ್ನೂ ಕಡೆಗಣಿಸಿ, ಸಾವಿಗೆ ಹಪಹಪಿಸುತ್ತಾ ಬದುಕು ಸಾಗಿಸುತ್ತಿದ್ದಳು ಒಂದು ಕಾಲದ ಪಡ್ಡೆ ಹುಡುಗರ ಕಣ್ಮಣಿ ಡಿಸ್ಕೋ ಶಾಂತಿ. ಅದಕ್ಕೆ ಕಾರಣ, ತಾನು ಪ್ರೀತಿಸಿ ಮದುವೆಯಾಗಿ, 23 ವರ್ಷ ಸುಖ ದಾಂಪತ್ಯ ನಡೆಸಿ, ಇಬ್ಬರು ಗಂಡು ಮಕ್ಕಳ ತಾಯಿಯಾಗಿ, ಅಪ್ಪಟ ಗೃಹಿಣಿಯಂತೆ ಜೀವನ ಸಾಗಿಸುತ್ತಿದ್ದ ಡಿಸ್ಕೋಶಾಂತಿ ಬದುಕಲ್ಲಿ ಬಿರುಗಾಳಿ ಎಬ್ಬಿಸಿದ್ದು ಆಕೆಯ ಗಂಡ, ತೆಲುಗಿನ ಖ್ಯಾತ ನಟ ಶ್ರೀಹರಿ ಅಕಾಲಿಕ ಸಾವು. ೮೦-೯೦ರ ದಶಕದ ಸಿನಿಪ್ರಿಯರ ಹಾಟ್ ಫೇವರಿಟ್ ಡಿಸ್ಕೋ ಶಾಂತಿ.‌ ಮಡಿವಂತರು ಮೂಗು ಮುರಿಯುತ್ತಿದ್ರೆ ಪಡ್ಡೆಗಳ ನಿದ್ದೆ ಕೆಡಿಸುವಂತಿದ್ದಳು. ಈಗಿನ ಐಟಂ ಡಾನ್ಸ್ ಅಂದಿನ ಕ್ಯಾಬರೆ. ಅದರಲ್ಲಿ ಡಿಸ್ಕೊಶಾಂತಿ ಟಾಪ್. ಅಂಥ ಡಿಸ್ಕೋ ಶಾಂತಿಗೆ ಈಗ 60 ವರ್ಷ. ಮೊನ್ನೆ ತಮಿಳು ಯೂಟ್ಯೂಬ್‌ವೊಂದರಲ್ಲಿ ಡಿಸ್ಕೋಶಾಂತಿ ಸಂದರ್ಶನ ನೋಡಲು ಸಿಕ್ಕಿತು. ಅಂದಿನ ತನ್ನ ಮಾದಕ ಮೈಮಾಟದಿಂದ ದಕ್ಷಿಣ ಭಾರತವಷ್ಟೇ ಅಲ್ಲ ಬಾಲಿವುಡ್‌, ಒಡಿಯಾ ಸೇರಿ ೯೦೦ ಚಿತ್ರಗಳಲ್ಲಿ ಕುಣಿದು ಕುಪ್ಪಳಿಸಿದ್ದ ಡಿಸ್ಕೋ ಶಾಂತಿ ಈಗ ಹೇಗಿದ್ದಾರೆ ಗೊತ್ತಾ? ಕ್ಯಾಬರೆ ಡಾನ್ಸ್‌ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ್ದ ಶಾಂತಕುಮಾರಿ ಅಲಿಯಾಸ್‌ ಡಿಸ್ಕೋ ಶಾಂತಿ ಬದುಕು ಮ...

ಟೈಗರ್ ಪ್ರಭಾಕರ್ ಜೀವನಚರಿತ್ರೆ

Image
  ಟೈಗರ್ ಪ್ರಭಾಕರ್ ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರಾಗಿದ್ದರು. ಅವರ ನಿಜ ಹೆಸರು ಪ್ರಭಾಕರ್ "ಟೈಗರ್" ಎಂಬ ಪದವನ್ನು ಅವರು ತಮ್ಮ ವೇಷಧಾರೆಯ ಹಾಗೂ ಹೋರಾಟದ ಪಾತ್ರಗಳಿಂದ ಪಡೆದುಕೊಂಡರು. ಅವರು 1980 ಮತ್ತು 1990ರ ದಶಕಗಳಲ್ಲಿ ಹೆಚ್ಚು ಪ್ರಸಿದ್ಧಿಯಾಗಿದ್ದರು. ತಮ್ಮ ವಿಶಿಷ್ಟ ಶೈಲಿ, ಶಕ್ತಿಯುತ ಅಭಿನಯ ಹಾಗೂ ನಿರ್ದಾಕ್ಷಿಣ್ಯ ನಂಟು ಪಾತ್ರಗಳಿಂದ ಅವರು ಜನಮಾನಸದಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದ್ದರು. ಆರಂಭಿಕ ಜೀವನ: ಟೈಗರ್ ಪ್ರಭಾಕರ್ ಜನನ 1948ರ ಮಾರ್ಚ್ 30th ರಂದು ಜನಿಸಿದರು , ಅವರು ಮೂಲತಃ ಕನ್ನಡಿಗರಾಗಿದ್ದರು. ಅವರು ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ವಿವಿಧ ಕೆಲಸಗಳಲ್ಲಿ ತೊಡಗಿದ್ದವರು. ಸಿನಿಮಾ ಜೀವನ: ಅವರು ತಮ್ಮ ಸಿನಿಮಾ ಜೀವನವನ್ನು ಸಹಾಯಕ ಪಾತ್ರಗಳಿಂದ ಆರಂಭಿಸಿದರು. ಮುಂದೆ ನಟನೆ, ಹೋರಾಟದ ದೃಶ್ಯಗಳಲ್ಲಿ ವಿಶಿಷ್ಟತೆಯನ್ನು ತೋರಿಸಿ ನಾಯಕನ ಪಾತ್ರಗಳಿಗೂ ಭರ್ಜರಿ ಎಂಟ್ರಿ ನೀಡಿದರು. ಅವರು ಕನ್ನಡ ಚಿತ್ರರಂಗದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಅಭಿನಯಿಸಿದ್ದರು. ಅವರ ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ "ಬಾಂಬೆ ದಾದ "ಮೈಸೂರ್ ಹುಲಿ " ಕಾಡಿನ ರಾಜ "ಕಲಿಯುಗ ಭೀಮ "ಸೆಂಟ್ರಲ್ ರೌಡಿ ಮತ್ತು ಖಳನಾಯಕ  ಸೇರಿವೆ. ತಮ್ಮ ಶಕ್ತಿಯುತ ಸಂಭಾಷಣಾ ಶೈಲಿ, ದೇಹದಾಕ್ಷಿಣ್ಯ ಮತ್ತು  ಪಾತ್ರಗಳಿಂದ ಅವರು ಟೈಗರ್ ಎಂಬ ಬಿರುದನ್ನು ಸಂಪಾದಿಸಿದರು. ವೈಯ...

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಗುಡ್ ನ್ಯೂಸ್ ಎಂದಿನಂತೆ ಸೇವೆ ಮುಂದುವರಿಸಲು ಕರ್ನಾಟಕ ಆದೇಶ‌

Image
  ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಗುಡ್ ನ್ಯೂಸ್ ಎಂದಿನಂತೆ ಸೇವೆ ಮುಂದುವರಿಸಲು ಕರ್ನಾಟಕ ಹೈಕೋರ್ಟ್ ಆದೇಶ‌ ರಾಜ್ಯದಲ್ಲಿ ಓಲಾ, ಉಬರ್ ಮತ್ತು ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಯನ್ನು ಜೂನ್‌ 15ರವರೆಗೆ ಮುಂದುವರಿಸಲು ಅನುಮತಿ ನೀಡಿ ಕರ್ನಾಟಕ ಹೈಕೋರ್ಟ್ ಇಂದು (ಏ29) ಆದೇಶ ಹೊರಡಿಸಿದೆ. ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸುವಂತೆ ಕೋರಿ ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈ. ಲಿ, ರೊಪ್ಪೆನ್ ಟ್ರಾನ್ಸ್‌ಪೋರ್ಟೇಶನ್‌ ಸರ್ವೀಸಸ್‌ ಪ್ರೈ. ಲಿ. & ಎಎನ್‌ಐ ಟೆಕ್ನಾಲಜೀಸ್ ಪ್ರೈ. ಲಿ. ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾ.ಬಿ.ಎಂ. ಶ್ಯಾಮಪ್ರಸಾದ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಅರ್ಜಿಯನ್ನು ಪುರಸ್ಕರಿಸಿದೆ. ಬೈಕ್‌ ಟ್ಯಾಕ್ಸಿ ಸೇವೆ ಮುಂದುವರಿಸಲು ಕರ್ನಾಟಕ ಕೋರ್ಟ್ ಆದೇಶ‌ ಬೈಕ್‌ ಟ್ಯಾಕ್ಸಿ ಕಾರ್ಯಾಚರಣೆ ಸ್ಥಗಿತಕ್ಕೆ ನೀಡಿದ್ದ ಗಡುವು ವಿಸ್ತರಣೆ ನ್ಯಾ.ಬಿ.ಎಂ.ಶ್ಯಾಮಪ್ರಸಾದ್ ಅವರ ಏಕಸದಸ್ಯ ಪೀಠದಿಂದ ವಿಚಾರಣೆ ರಾಜ್ಯದಲ್ಲಿ ಓಲಾ, ಉಬರ್ ಮತ್ತು ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಯನ್ನು ಜೂನ್‌ 15ರವರೆಗೆ ಮುಂದುವರಿಸಲು ಅನುಮತಿ ನೀಡಿ ಕರ್ನಾಟಕ ಹೈಕೋರ್ಟ್ ಮಂಗಳವಾರ (ಏ29) ಆದೇಶ ಹೊರಡಿಸಿದೆ. ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸುವಂತೆ ಕೋರಿ ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈ. ಲಿ, ರೊಪ್ಪೆನ್ ಟ್ರಾನ್ಸ್‌ಪೋರ್ಟೇಶನ್‌ ಸರ್ವೀಸಸ್‌ ಪ್ರೈ. ಲಿ. & ಎಎನ್‌ಐ ಟೆಕ್ನಾಲಜೀಸ್ ಪ್ರೈ. ಲಿ. ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯ...

ಶಂಕರ್ ನಾಗ್ ಜೀವನ ಕಥೆ ಕರುನಾಡು ಕಂಡ ಅದ್ಬುತ ಪ್ರತಿಭೆ

Image
  ಶಂಕರನಾಗ್ (೯ ನವೆಂಬರ್ ೧೯೫೪ – ೩೦ ಸೆಪ್ಟೆಂಬರ್ ೧೯೯೦) ಕನ್ನಡ ಚಿತ್ರರಂಗದ ಅಮರವಿದ್ವಾಂಸ, ಪ್ರತಿಭಾಶಾಲಿ ನಟ, ನಿರ್ದೇಶಕ ಮತ್ತು ನಾಟಕಕಾರರಾಗಿದ್ದರು. ಅವರು ಕರ್ನಾಟಕದ ಹೊನ್ನಾವರ, ಉತ್ತರ ಕನ್ನಡ ಜಿಲ್ಲೆಯವರಾಗಿದ್ದರು. ಪ್ರಾರಂಭಿಕ ದಿನಗಳು: ಶಂಕರನಾಗ್ ಬಾಲ್ಯವು ಹಳ್ಳಿಯ ಸರಳ ಜೀವನದಿಂದ ಆರಂಭವಾಯಿತು. ಶಾಲಾ ಶಿಕ್ಷಣದ ನಂತರ, ತಮ್ಮ ಜೇಷ್ಠ ಸಹೋದರ ಅನಂತನಾಗ್ ಅವರ ಹಾದಿಯನ್ನು ಅನುಸರಿಸಿ, ನಟನೆಯತ್ತ ಮೋಹಿತರಾದರು. ಮೊದಲು ಮೆರವಣಿಗೆ ನಾಟಕಗಳಲ್ಲಿ ಭಾಗವಹಿಸಿ, ನಂತರ ಚಿತ್ರರಂಗ ಪ್ರವೇಶಿಸಿದರು. ಚಲನಚಿತ್ರಜೀವನ: 1978ರಲ್ಲಿ 'ಒಂದಾನು ಒಂದು ಕಾಲದಲ್ಲಿ ' ಚಿತ್ರದ ಮೂಲಕ ಶಂಕರನಾಗ್ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ ' ಹಿಟ್ ಸಿನಿಮಾಗಳನ್ನು ನೀಡಿದ ಅವರು,ಮಿಂಚಿನ ಓಟ ಜನಪ್ರಿಯತೆ ಗಳಿಸಿದರು. ಹೆಸರಾಂತ ಚಿತ್ರಗಳು: ಗೀತಾ, ಸ್ಪೆಷಲ್ ಸಾಂಗ್ಲಿಯಾನ,ಆಟೋ ರಾಜ,ಹೊಸ ಜೀವನ, ಮಾಲ್ಗುಡಿ ಡೇಸ್ (ಟಿವಿ ಧಾರಾವಾಹಿ – ನಿರ್ದೇಶಕ) ವಿಶೇಷತೆಗಳು: ಶಂಕರನಾಗ್ ಅವರನ್ನು ಕನ್ನಡದ ಮಾಸ್ಸ್ ಹೀರೋ ಕರಾಟೆ ಕಿಂಗ್ ಎಂಬ ಹಣೆಪಟ್ಟಿ ನೀಡಲಾಗಿತ್ತು. ಬಹುಪಾಲು ಸಿನಿಮಾಗಳಲ್ಲಿ ಜನಸಾಮಾನ್ಯರ ಜೀವನದ ನೈಜ ಚಿತ್ರಣ ಮೂಡಿಸಿದರು. 'ಮಾಲ್ಗುಡಿ ಡೇಸ್' ಧಾರಾವಾಹಿ ಮೂಲಕ ದೇಶಾದ್ಯಾಂತ ಹೆಸರು ಗಳಿಸಿದರು. ಅವರು ಉತ್ತಮ ನಿರ್ದೇಶಕರಾಗಿಯೂ ಖ್ಯಾತಿ ಪಡೆದಿದ್ದರು. ಅಂತಿಮ ದಿವಸಗಳು: ೧೯೯೦ರಲ್ಲಿ ಶಂಕರನಾಗ್ ತಮ್ಮ ಚುರುಕಾದ ವಯಸ್ಸಿನಲ್ಲೇ...