ಡಾ. ಅಂಬರೀಶ್ ಜೀವನ ಕಥೆ (ಮಂಡ್ಯದ ಗಂಡು)
ಡಾ. ಅಂಬರೀಶ್ ಜೀವನ ಕಥೆ (ಮಂಡ್ಯದ ಗಂಡು)
ಡಾ. ಅಂಬರೀಶ್ (ಅಸಲಿ ಹೆಸರು ಅಮರನಾಥ್ ) ಕನ್ನಡa ಚಿತ್ರರಂಗದ ಪ್ರಸಿದ್ಧ ನಟ ಮತ್ತು ರಾಜಕಾರಣಿಯಾಗಿದ್ದರು. ಅವರನ್ನು ಜನಪ್ರಿಯವಾಗಿ "ರೆಬೆಲ್ ಸ್ಟಾರ್" ಎಂದೂ ಕರೆಯುತ್ತಾರೆ.
ಜನನ: 29 ಮೇ 1952, ದೊಡ್ಡರಸಿನಕೆರೆ
ಮರಣ: 24 ನವೆಂಬರ್ 2018 (ವಯಸ್ಸು 66 ವರ್ಷ), ವಿಕ್ರಂ ಆಸ್ಪತ್ರೆ, ಬೆಂಗಳೂರು
ಸಂಗಾತಿ: ಸುಮಲತಾ (ಮ. 1991–2018)
ಮಕ್ಕಳು: ಅಭಿಷೇಕ್ ಅಂಬರೀಶ್
ಪ್ರಶಸ್ತಿಗಳು: ಫಿಲ್ಮ್ಫೇರ್ ಅತ್ಯುತ್ತಮ ನಟ ಪ್ರಶಸ್ತಿ – ಕನ್ನಡ, ಫಿಲ್ಮ್ಫೇರ್ ಜೀವಮಾನ ಸಾಧನೆ ಪ್ರಶಸ್ತಿ – ದಕ್ಷಿಣ
ಪಾಲಕರು: ಹುಚ್ಚೇಗೌಡ, ಪದ್ಮಮ್ಮ
ಅಂಬರೀಶ್ ಬಾಲ್ಯದಲ್ಲಿ ಸಹಜವಾದ ಸರಳ ಜೀವನ ನಡೆಸಿದರು. ನಟನೆಯ ಆಕರ್ಷಣೆ ಹೊಂದಿದ್ದ ಅವರು ನಟನ ತರಬೇತಿ ಪಡೆದರು ಮತ್ತು ತಕ್ಷಣವೇ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಬೆಳೆಸಿಕೊಂಡರು. ಅವರು 1972ರಲ್ಲಿ ನಾಗರಹಾವು ಚಿತ್ರದ ಮೂಲಕ ತಮ್ಮ ಅಭಿನಯ ಪ್ರಾರಂಭಿಸಿದರು. ಈ ಚಿತ್ರದಿಂದಲೇ ಅಂಬರೀಶ್ ಜನಪ್ರಿಯತೆಯನ್ನು ಸಂಪಾದಿಸಿದರು.
ಅಂಬರೀಶ್ ತಮ್ಮ ಚಲನಚಿತ್ರ ಜೀವನದಲ್ಲಿ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ಅವರ ಪ್ರಮುಖ ಚಿತ್ರಗಳಲ್ಲಿ ಅನೂರೂಪ ಚಕ್ರವ್ಯೂಹ , ಒಲವಿನ ಉಡುಗರೆ ,ಮಂಡ್ಯದ ಗಂಡು, ದಿಗ್ಗಜರು, ಅಂತ,ನಾಗರಹಾವು,ಒಡಹುಟ್ಟಿದವರು,ಸೇರಿವೆ ತಮ್ಮ ವಿಶಿಷ್ಟ ಶೈಲಿ, ಶ್ರದ್ಧೆ ಮತ್ತು ಪ್ರಾಮಾಣಿಕತೆಗೆ ಅವರು ಜನಮನದಲ್ಲಿ ಅಮಿತಸ್ಥಾನವನ್ನು ಪಡೆದರು.
ಅಂಬರೀಶ್ ರಾಜಕೀಯಕ್ಕೂ ಕಾಲಿಟ್ಟರು. 1994ರಲ್ಲಿ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ರಾಜಕೀಯ ಪ್ರವೇಶಿಸಿದರು. ಅವರು ಸಂಸದರಾಗಿ ಮತ್ತು ಕೆಂದ್ರೀಯ ಸಚಿವರಾಗಿ ಸೇವೆ ಸಲ್ಲಿಸಿದರು. "ಮಂಡ್ಯ ದ ಗಂಡು " ಎಂದು ಕೂಡ ಅವರನ್ನು ಕರ್ನಾಟಕ ಜನತೆ ಬಹಳ ಪ್ರೀತಿಯಿಂದ ಕರೆದುಕೊಳ್ಳುತಿದ್ದರು .
ಕಲಿಯುಗದ ಕರ್ಣ ಎಂದು ಸಹ ಕರೆಯಲ್ಪಡುತಿದ್ದರು
ಅವರ ಸರಳತೆ, ಮಾನವೀಯತೆ ಮತ್ತು ಸಮಾಜಮುಖಿ ಕೆಲಸಗಳು ಅವರನ್ನು ನಿಜವಾದ ಜನ ನಾಯಕನನ್ನಾಗಿ ರೂಪಿಸಿತು.
ಡಾ. ಅಂಬಿರೇಶ್ 2018ರ ನವೆಂಬರ್ 24ರಂದು ಹೃದಯಾಘಾತದಿಂದ ನಿಧನರಾದರು. ಅವರ ಮರಣದಿಂದ ಕನ್ನಡ ಚಿತ್ರರಂಗ ಮತ್ತು ಕರ್ನಾಟಕ ಜನತೆ ಗೆ ಭಾರೀ ನಷ್ಟವಾಯಿತು.
Comments
Post a Comment